ಕೊಳಲನೂದುವ ಮುರಳಿ ಮೋಹನ... ಕಾಳಿಂಗನ ಹೆಡೆಯ ಮೇಲೆ ನರ್ತನ ಮಾಡುವ ಕಾಳೀಯ ಮರ್ಧನ... ರಾಧೆಯ ಜತೆ ನಾಟ್ಯವಾಡುವ ರಾಧಾಕೃಷ್ಣ....
ಕದ್ರಿ ಶ್ರೀಮಂಜುನಾಥ ದೇವಸ್ಥಾನ ಪ್ರಾಂಗಣದಲ್ಲೆಲ್ಲೂ ನೋಡಿದರೂ ಪುಟಾಣಿ ಕೃಷ್ಣರ ಓಡಾಟ... ರಾಧೆಯರ ಒಡನಾಟ... ಯಶೋಧೆಯರ ಮಮಕಾರ...
ನಗು, ಕೂಗು, ಹಠ, ಕೋಪ... ಎಲ್ಲವನ್ನೂ ತೋರಿಸುವ ಪುಠಾಣಿ ಕೃಷ್ಣರ ಹಿಂದೆ ಓಡುವ ತಾಯಂದಿರು, ಅಜ್ಜಿಯರು, ತಾತ, ತಂದೆ... ಜತೆಗೊಂದಿಷ್ಟು ಸಂಬಂಧಿಕರ ಬಳಗ.
ಮಣ್ಣಿನ ಮಡಕೆಯೊಳಗಿಟ್ಟ ಐಸ್‌ಕ್ರೀಮ್‌ನ್ನೇ ಬೆಣ್ಣೆಯಂತೆ ಮೆಲ್ಲುವ ತುಂಟ ಕೃಷ್ಣ, ಮೇಕಪ್ ಮಾಡಲು ಹೊರಟರೆ ಮುಖ ತಿರುಗಿಸಿವ ಹಠಮಾರಿ ಗೋಪಾಲ... ಚೆಂಡೆ ಬಡಿಯುವ ದೇವಕಿ ಕಂದ... ಹೀಗೆ ಹಲವು ವೇಷ ತೊಟ್ಟ ಪುಟಾಣಿಗಳು ಅಂಗಣದಲ್ಲಿ ಕಾಣುತ್ತಿದ್ದರು.
ಕೃಷ್ಣನ ವೇಷ ತೊಟ್ಟ ಸಂತಸ, ಖುಷಿ ಮಕ್ಕಳ ಮುಖದಲ್ಲಿ ಕಾಣುತ್ತಿದ್ದರೆ, ಮಕ್ಕಳಿಗೆ ವೇಷ ತೊಡಿಸಿದ ಸಂಭ್ರಮ ತಂದೆ ತಾಯಂದಿರು, ಪೋಷಕರ ಮೊಗದಲ್ಲಿ ಮಿನುಗುತ್ತಿತ್ತು.
ಕಲ್ಕೂರ ಪ್ರತಿಷ್ಠಾನ ವತಿಯಿಂದ ಕದ್ರಿ ಶ್ರೀಮಂಜುನಾಥ ದೇವಸ್ಥಾನದ ಪ್ರಾಂಗಣದಲ್ಲಿ ನಡೆದ ರಾಷ್ಟ್ರ ಮಟ್ಟದ ಮಕ್ಕಳ ಉತ್ಸವ ‘ಶ್ರೀಕಷ್ಣ ವೇಷ ಸ್ಪರ್ಧೆ’ಯ ದೃಶ್ಯಾವಳಿ.

No comments:
Post a Comment