ಕಾಳಿಂಗದೊಡನೆ ಸರಸವಾಡುತ್ತಿರುವ ಗುರುರಾಜ್ |
ತನ್ನ ಅಜ್ಜಿಯ ಸಾವಿಗೆ ಕಾರಣವಾದ ಉರಗಗಳನ್ನು ನಾಶ ಮಾಡಬೇಕು ಎಂದು ನಾಗರ ಹಾವು ಹಿಡಿದುಕೊಂಡು ಕಾಡಿಗೆ ಹೊರಟ ಬಾಲಕನಿಗೆ ಅದ್ಯಾವ ರೀತಿ ಮನಪರಿವರ್ತನೆಯಾಯ್ತೋ ಗೊತ್ತಿಲ್ಲ.
ಹಾವುಗಳ ಬಗೆಗಿನ ದ್ವೇಷ ಸಾಧನೆಚಿiನ್ನು ಮರೆತು ಅವುಗಳನ್ನು ಕಾಪಾಡುವ ಪಣತೊಟ್ಟ ಆತ ಮುಂದೆ ಹಾವುಗಳನ್ನು ಹಿಡಿಯುವ ಖ್ಯಾತಿ ಪಡೆದ ಜತೆಗೆ ಇತರರಿಗೂ ಮಾಹಿತಿ ನೀಡುವ ಕೃತಿಯೊಂದನ್ನು ರಚಿಸಿಯೇ ಬಿಟ್ಟಿದ್ದಾರೆ.
ಹಾವುಗಳ ಬಗ್ಗೆ ವ್ಶೆಜ್ಞಾನಿಕವಾಗಿ ತಿಳಿದುಕೊಂಡದ್ದಕ್ಕಿಂತ ನಂಬುಗೆಗಳ ಆಧಾರದಲ್ಲಿ ತಿಳಿದುಕೊಂಡದ್ದೇ ಹೆಚ್ಚು. ಅವುಗಳ ವ್ಶೆಜ್ಞಾನಿಕ ಹಾಗೂ ಆಡು ಮಾತಿನ ಹೆಸರನ್ನು ಬಿಟ್ಟರೆ ಅವುಗಳ ಜೀವನ ಕ್ರಮದ ಬಗ್ಗೆ ಜೀವ ವಿಜ್ಞಾನ ಕಲಿಯುವವರಿಗೆ ಹೊರತಾಗಿ ಇನ್ನಾರಿಗೂ ಗೊತ್ತಿಲ್ಲ.
ಹೀಗೆ ಗೊತ್ತಿಲ್ಲ ಎಂಬ ಮಾಹಿತಿರಹಿತ ಜೀವನಕ್ಕೆ ‘ಅವರು’ ಪುಸ್ತಕ ರೂಪದ ಕೊಡುಗೆಯನ್ನು ನೀಡುತ್ತಿದ್ದಾರೆ.
ಆಟೋ ಓಡಿಸುತ್ತಿದ್ದ ಕೈಗಳು ಹಾವನ್ನು ಹಿಡಿಯುವಲ್ಲಯೂ ಸಲೀಸು. ಆಟೋ ಹೋಗಿ ಟ್ಯಾಕ್ಸಿ ಬಂದಿದೆ. ಆದರೆ ಹಾವನ್ನಿಡಿಯುವ ಹುಮ್ಮಸ್ಸು ಇನ್ನೂ ಕುಂದಿಲ್ಲ. ಜತೆಗೆ ಉರಗಗಳ ಬಗ್ಗೆ ಬರೆಯಬೇಕೆಂಬ ದ್ವಿಗುಣಗೊಂಡ ಹುಮ್ಮಸ್ಸು ಸದ್ಯದಲ್ಲೆ ಪುಸ್ತಕ ರೂಪದಲ್ಲಿ ಹೊರಬರಲಿದೆ.
ಎಸ್... ಅವರೇ ಸ್ನೇಕ್ ಗುರುರಾಜ್. ಉಡುಪಿ ಪುತ್ತೂರು ಲಿಂಗೊಟ್ಟು ಗುಡ್ಡೆಯ ಗುರುರಾಜ್ ಸನಿಲ್. ಉಡುಪಿ ಜಿಲ್ಲೆಯಲ್ಲಿ ಎಲ್ಲಿ ಹಾವು ಕಂಡು ಜನ ಭಯಭೀತರಾಗಿ ಅವರಿಗೆ ಕರೆ ಮಾಡಿದರೆ ಅಲ್ಲಿ ಗುರುರಾಜ್ ಹಾಜರ್. ತನ್ನ ಚಾಕಚಕ್ಯತೆಯಿಂದ ಉರಗವನ್ನು ಹಿಡಿದು ಕಾಡಿಗೆ ಬಿಟ್ಟುಬರುವಲ್ಲಿಯ ವರೆಗೆ ಅವರ ಜವಾಬ್ದಾರಿ. ಹೀಗೆ ಹಾವು ಕಂಡು ಹೆದರಿದವರಿಗೆ ಸಾಂತ್ವಾನ ನೀಡುತ್ತಾರೆ ಅವರು.
ಹೀಗೆ ಹಾವುಗಳ ಜತೆಗಿನ ಮೂವತ್ತು ವರ್ಷಗಳ ಸುದೀರ್ಘ ಒಡನಾಟದ ಅನುಭವದ ಜತೆಗೆ ಅವುಗಳ ಪೂರ್ಣ ಮಾಹಿತಿಯ ಕೃತಿ ಸದ್ಯದಲ್ಲೇ ಲೋಕಾರ್ಪಣೆಯಾಗಲಿದೆ.
ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಗುರುತಿಸಲಾದ ನಲ್ವತ್ತು ಪ್ರಭೇದದ ಹಾವುಗಳನ್ನು ಸ್ವತಃ ಸಂಗ್ರಹಿಸಿ, ಅವುಗಳ ಜೀವನ ಕ್ರಮವನ್ನು ಅಧ್ಯಯನ ನಡೆಸಿ ಅಕ್ಷರ ರೂಪವನ್ನು ಅವರು ನೀಡಿದ್ದಾರೆ.
ಹಾವುಗಳ ಸ್ಥಳೀಯ, ವ್ಶೆಜ್ಞಾನಿಕ ಹೆಸರು ಸಹಿತ ಅವುಗಳ ಮಿಲನ ಸಮಯ, ಸಂತಾನಾಭಿವೃದ್ಧಿ... ಹೀಗೆ ಒಟ್ಟಿನಲ್ಲಿ ಹೇಳುವುದಾದರೆ ಹುಟ್ಟಿನಿಂದ ಸಾವಿನ ವರೆಗೆ ಆ ನಲ್ವತ್ತು ಪ್ರಭೇದಗಳ ಹಾವುಗಳ ದಾಖಲೀಕರಣ ಈ ಪುಸ್ತಕದಲ್ಲಾಗಿದೆ.
ನಮ್ಮ ಸುತ್ತಮುತ್ತ ಕಂಡು ಬರುವ ಹಾವುಗಳ ವರ್ಣಚಿತ್ರಗಳ ಸಹಿತ ಮಾಹಿತಿ ನೀಡಿರುವುದರಿಂದ ಕೇವಲ ಜೀವ ವಿಜ್ಞಾನದ ವಿದ್ಯಾರ್ಥಿಗಳಿಗೆ ಮಾತ್ರವಲ್ಲದೆ ಜನಸಾಮಾನ್ಯರಿಗೂ ಸಂಗ್ರಾಹ್ಯಯೋಗ್ಯ ಪುಸ್ತಕವಾಗಿ ಮೂಡಿಬಂದಿದೆ.
ಹಾವುಗಳ ಬಗ್ಗೆ ತಪ್ಪು ಕಲ್ಪನೆ ಬೇಡ ಮಾತ್ರವಲ್ಲದೆ ಮೂಢ ನಂಬಿಕೆಗಳನ್ನು ತೊರೆದು ನಿಜ ನಾಗರವ ಜೀವಿಯಂತೆ ಕಾಣಿ ಎಂಬುದು ಅವರ ನೇರ ನುಡಿ.
ಹಾಗಾಗಿಯೇ ಅವರು ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ತಾವು ಕಂಡ ಉರಗಗಳ ಬಗ್ಗೆ ಪುಸ್ತಕವೊಂದನ್ನು ಹೊರ ತರುತರಲು ಶ್ರಮಿಸಿದ್ದಾರೆ.
ಬಹಳಷ್ಟು ಉರಗಗಳು ವಿಷಕಾರಿಯಲ್ಲ. ಮಾತ್ರವಲ್ಲ ಅವು ನಮಗೇನು ಮಾಡುವುದೂ ಇಲ್ಲ. ಆದರೆ ಕೆಲವರು ಭಯದಿಂದ ಅಂತಹ ಹಾವುಗಳನ್ನು ಕೊಂದೇ ಬಿಡುತ್ತಾರೆ. ಆ ತಪ್ಪುಗಳನ್ನು ಮಾಡದಿರಿ ಎಂಬುದೇ ಅವರ ಕೃತಿಯ ಹಿಂದಿರುವ ಆಶಯ.
ಉರಗಪ್ರಿಯ ಗುರುರಾಜ್
ತನ್ನ ೧೮ ನೇ ವರ್ಷ ಪ್ರಾಯದಿಂದ ಹಾವು ಹಿಡಿಯುವ ಪ್ರವೃತ್ತಿಯನ್ನು ರೂಢಿಸಿರುವ ಇವರು ಈವರೆಗೆ ಸುಮಾರು ೧೧೭೫೨
ಹಾವುಗಳನ್ನು ಹಿಡಿದು ಜೀವಂತವಾಗಿ ಕಾಡಿಗೆ ಬಿಟ್ಟು ಸಂರಕ್ಷಿಸಿದ ದಾಖಲೆ ನಮ್ಮ ಮುಂದೆ ಇಡುತ್ತಾರೆ.
ಹಾವನ್ನು ಕೊಲ್ಲಬಾರದೆಂಬ ಒಂದೇ ಉದ್ದೇಶದಿಂದ ಜನನಿಬಿಡ ಪ್ರದೇಶದಿಂದ ಹಾವನ್ನು ಹಿಡಿದು ದೂರದ ಕಾಡಿನಲ್ಲಿ ಬಿಟ್ಟು ಬರುತ್ತಾರೆ.
ಸಣ್ಣದಿರುವಾಗ ಧೈರ್ಯವಿದ್ದರೆ ಹಾವು ಹಿಡಿ ಎಂಬ ಮಾತಿನಿಂದ ಛಲ ಬೆಳೆಸಿದ ಗುರುರಾಜ್ ಅವರು ಹಾವು ಹಿಡಿಯುವುದನ್ನು ನೋಡಿ ಕಲಿತದ್ದು, ದಿಲ್ಲಿಯ ಸಾಕೇತ್ ಎಂಬಲ್ಲಿಗೆ ಕೆಲಸದ ನಿಮಿತ್ತ ತೆರಳಿದ್ದಾಗ ಅಲ್ಲಿನ ಸರ್ದಾರ್ಜಿ ಬಿಶ್ವಾಸ್ ಎಂಬವರು ಹಾವು ಹಿಡಿಯುವುದನ್ನು ನೋಡಿದ ಗುರುರಾಜ್ ಅದನ್ನು ಕಲಿತರು. ಆದರೆ ಆತ ಹಾವನ್ನು ಸಾಯಿಸುತ್ತಿದ್ದುರಿಂದ ಆತನಿಂದ ಬೇರ್ಪಟ್ಟೆ ಎನ್ನುತ್ತಾರೆ ಗುರುರಾಜ್.
ಹಾವು ಹಿಡಿಯುತ್ತಿದ್ದಂತೆ ಒಟ್ಟು ಹನ್ನೊಂದು ಬಾರಿ ಹಾವು ಕಡಿತಕ್ಕೆ ಒಳಗಾಗಿದ್ದಾರೆ ಗುರುರಾಜ್. ಅದರಲ್ಲೂ ಮಿಶನ್ ಕೌಂಪೌಡ್ ಬಳಿ ಹಾವು ಕಡಿತಕ್ಕೆ ಒಳಗಾದ ಅವರು ಸುಮಾರು ಏಳು ದಿನ ಪ್ರeಹೀನ ಸ್ಥಿತಿಯಲ್ಲಿದ್ದರು. ಹಾವು ಕಡಿತದಿಂದ ಕೈಗೆ ಆದ ಗಾಯ ಗ್ಯಾಂಗ್ರಿನ್‌ಗೆ ತಿರುಗುವ ಹಂತದಲ್ಲಿದ್ದರಿಂದ ಪ್ಲಾಸ್ಟಿಕ್ ಸರ್ಜರಿ ಮಾಡಲಾಗಿದೆ. ಇಂದಿಗೂ ಗಾಯದ ದೊಡ್ಡ ಕಲೆ ಅವರ ಕೈಯಲ್ಲಿ ಹಾಗೆಯೇ ಉಳಿದುಕೊಂಡಿದೆ. ಆ ಸಂದರ್ಭ ಸಹಾಯ ಮಾಡಿದ ಇಂಡಿಯಾ ಆಟೊ ಮೊಬೈಲ್‌ನ ಪಾಲುದಾರ ಬಲರಾಂ ಭಟ್ ಅವರನ್ನು ಇಂದಿಗೂ ನೆನೆಯುತ್ತಾರೆ. ತುಂಬ ಪ್ರೋತ್ಸಾಹ ಇಂದಿಗೂ ನೀಡುತ್ತಿದ್ದಾರೆ ಎಂದು ಸಂತೋಷದಿಂದ ಹೇಳಿಕೊಳ್ಳುತ್ತಾರೆ.
ಕಳೆದ ನಾಲ್ಕು ವರ್ಷದ ಹಿಂದೆ ಮತ್ತೊಮ್ಮೆ ಹಾವು ಕಡಿದಿದ್ದಾಗ ಮೂರು ದಿನ ಕೋಮಾದಲ್ಲಿದ್ದರು. ಅಲೋಪತಿ ಮದ್ದು ಮಾಡಿದ ಬಳಿಕ ಆಯುರ್ವೇದ ಹಾಗೂ ಸ್ವಯಂ ಚಿಕಿತ್ಸೆಯ ಮೂಲಕ ಗಾಯವನ್ನು ಗುಣಪಡಿಸುತ್ತಾ ಬಂದರು.
ಹಾವುಗಳ ಬಗ್ಗೆ ಪ್ರಕಟಗೊಂಡ ಹಲವಾರುಪುಸ್ತಕ ಹಾಗೂ ಸುದೀರ್ಘ ಹಾವಿನ ಜತೆಗಿನ ಸಂಪರ್ಕದಿಂದ ಅದರ ಬಗ್ಗೆ ತಿಳಿದಿರುವ ಅವರು ಅನೇಕ ವಿಚಾರಗಳನ್ನು ಬಿಚ್ಚಿಡುತ್ತಾ ಹೋಗುತ್ತಾರೆ.
ಶಾಲೆಗಳಲ್ಲಿ ಹಾವಿನ ಬಗ್ಗೆ ಪ್ರಾತ್ಯಕ್ಷಿಕೆ ಮಕ್ಕಳಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ರಮವನ್ನು ನೀಡುತ್ತಾ ಬಂದಿದಿರುವ ಅವರು ಕೆಲವೊಂದು ಹಾವುಗಳ ಮೊಟ್ಟೆಯಿಂದ ಮರಿ ಮಾಡಿದ ಅನುಭವವು ಇದೆ.
ಹಾವಿನ ಬಗ್ಗೆ ವಿಶೇಷ ಕಾಳಜಿ ವಹಿಸುತ್ತಿರುವ ಇವರು ಹೇಳುವುದಿಷ್ಟು ಯಾವುದೇ ಹಾವನಾದರೂ ಕೊಲ್ಲಬೇಡಿ ಅದನ್ನು ಅದರಷ್ಟಕ್ಕೆ ಬಿಟ್ಟರೆ ಏನೂ ಮಾಡುವುದಿಲ್ಲ. ತೊಂದರೆ ಮಾಡಿದರೆ ಮಾತ್ರ ಬುಸುಗುಟ್ಟಿ ಕಚ್ಚುತ್ತವೆ. ಉಳಿದಂತೆ ಅವು ಏನೂ ಮಾಡುವುದಿಲ್ಲ ಎನ್ನುತ್ತಾರೆ.
ಕೃತಿಯ ಹೈಲೈಟ್ಸ್
ಕೃತಿಯ ಮುಖಪುಟ |
ಅವಿಭಜಿತ ದ.ಕ.ದಲ್ಲಿ ಹಾವುಗಳನ್ನು ಹಿಡಿಯುವವರೊಬ್ಬರು ಪ್ರಥಮ ಬಾರಿಗೆ ಇಂತಹ ಕೃತಿಯೊಂದನ್ನು ಹೊರ ತರುತ್ತಿದ್ದಾರೆ.
ಹಾವುಗಳ ವರ್ಣಚಿತ್ರ ಸಹಿತ ಸಂಪೂರ್ಣ ಮಾಹಿತಿಯನ್ನು ಈ ಹೊತ್ತಗೆ ಹೊಂದಿದೆ.
ಹನ್ನೊಂದು ಸಾರಿ ವಿಷಪೂರಿತ ಹಾವಿನ ಕಡಿತಕ್ಕೊಳಗಾಗಿ ಎರಡು ಬಾರಿ ಸಾವಿನ ದವಡೆಯೊಳಗೆ ಹೋಗಿ ವಾರಗಟ್ಟಲೆ ಕೋಮದಲ್ಲೆ ಕಳೆದಿದ್ದಾರೆ ಗುರುರಾಜ್.
ಹಾವುಗಳ ಬಗೆಗಿನ ನಂಬಿಕೆ ಹಾಗೂ ವಾಸ್ತವಗಳ ಬಗ್ಗೆ ಕೂಲಂಕಷ ವಿಮರ್ಶೆ ಈ ಕೃತಿಯಲ್ಲಿದೆ.
೩೦ ವರ್ಷದ ಅನುಭವ ಕೃತಿಯಲ್ಲಿದೆ.