ಶತಮಾನ ಪೂರೈಸಿದ ಬಡಿಲಗುತ್ತು ಮನೆ
















ಮನೆಯ ಮುಂಭಾಗ

ಬತ್ತದ ಗದ್ದೆಗಳು ಹೋಗಿ ಕಾಂಕ್ರೀಟ್ ಕಾಡು ಸೃಷ್ಟಿಯಾಗುತ್ತಿದ್ದಂತೆ ಹಳೆಕಾಲದಲ್ಲಿದ್ದ ಮನೆಗಳು ಕೂಡಾ ಅವನತಿಯತ್ತ ಸಾಗಿದವು. ಹಳ್ಳಿ ಹೋಗಿ ನಗರ ಪ್ರದೇಶವಾಗುತ್ತಿದ್ದಂತೆ ಒಚಿದು ಕಾಲದಲ್ಲಿ ಅಪೂರ್ವವೆನಿಸಿದ ಮನೆಗಳು ಕೂಡಾ ಮರೆಯಾಗತೊಡಗಿದವು.


ಮನೆಯ ಬದಿಯ ನೋಟ


ಆದರೆ ಇಂದಿಗೂ ಕೆಲವು ಭಾಗದಲ್ಲಿ ಹಿಂದಿನ ತಲೆಮಾರಿನ ಮನೆಗಳು ಅಲ್ಲಲ್ಲಿ ಕಾಣ ಸಿಗುತ್ತವೆ. ಅವುಗಳ ಪೈಕಿ ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ಬಳಿ ರಾಷ್ಟ್ರೀಯ ಹೆದ್ದಾರಿ ೪೮ರ ಕಣ್ಣೂರು ಅಡ್ಯಾರ್ ಸಮೀಪ ಕಾಣಸಿಗುವ ಬಡಿಲಗುತ್ತು ಮನೆಯೂ ಒಂದು.


ಚಾವಡಿ


ಹೆಬ್ಬಾಗಿಲು
ಸರಿಯಾಗಿ ಒಂದು ಶತಮಾನದ




ಹಿಂದೆ ನಿರ್ಮಾಣವಾದ `ಬಡಿಲಗುತ್ತು' ಮನೆಗೆ ಈ ವರ್ಷ(೨೦೧೦) ಶತಕ ಕಂಡ ಸಂಭ್ರಮ. ಸುಮಾರು ಒಂದೂವರೆ ಎಕರೆ ಪ್ರದೇಶದಲ್ಲಿ ಒಂದು ಮಾಳಿಗೆ




ಕಂಬದ ಮೇಲಿನ ಕೆತ್ತನೆ
ಸಹಿತ ಸುತ್ತು ಪೌಳಿಯನ್ನು ಹೊಂದಿರುವ ಈ ಮನೆ ಇಂದಿಗೂ ತನ್ನ ಮೂಲಸ್ವರೂಪ ಹಾಗೂ ಸೊಬಗನ್ನು ಉಳಿಸಿಕೊಂಡಿರುವುದು ಈ


ಮನೆಯೊಳಗೆ ಕಂಬಗಳ ಸಾಲು
ನಾನಾ ಗಾತ್ರ ಮತ್ತು ಆಕಾರದ ಕಂಬಗಳು.


ಮನೆಯ ವೈಶಿಷ್ಟ್ಯ.




ಬಿ.ಧೂಮ ರೈ ೧೯೦೯ರಲ್ಲಿ  ಈ ಮನೆಯನ್ನು ನಿರ್ಮಿಸಿದ್ದಾರೆ.
ಕುಸುರಿ ಕಲೆಗಳ ಆಗರ
ಮರದ ಬಾಗಿಲು ಹಾಗೂ ಕಿಟಕಿಯ ದಾರಂದ, ಕಂಬ ಹಾಗೂ


ಬೃಹತ್‌ ಗಾತ್ರದ ಕಿಟಕಿ


ಮುಚ್ಚಿಗೆಗಳಲ್ಲಿ ಕಲಾತ್ಮಕ
ಕುಸುರಿ ಕಲೆಗಳು ರಾರಾಜಿಸುತ್ತವೆ. ಚಾವಡಿಯಲ್ಲಿರುವ ದ್ವಾರದ ದಾರಂದದಲ್ಲಿ ಗಜಲಕ್ಷ್ಮಿ ಹಾಗೂ ಶ್ರೀರಾಮ ಪಟ್ಟಾಭಿಷೇಕದ ಚಿತ್ರಣವನ್ನು ಮೇಲ್ಬಾಗದಲ್ಲಿ ಹಾಗೂ ಸುತ್ತಲೂ ಹೂವಿನ ಕುಸುರಿ ಕೆತ್ತನೆ ಆಕರ್ಷಣೀಯವಾಗಿದೆ. ಅದೇ ಚಾವಡಿಯಲ್ಲಿರುವ ಎರಡು ಕಿಟಕಿಗಳ ದಾರಂದದಲ್ಲಿಯೂ ಹೂವಿನ ಕುಸುರಿ ಕಲೆ ಚಿತ್ತಾಕರ್ಷಕವಾಗಿದ್ದು, ಕಂಚಿನ ದಪ್ಪ ಗಾತ್ರದ ಸರಳುಗಳನ್ನು
ಮುಂಬಾಗಿಲು
ಮುಂಬಾಗಿಲಿನ ಮೇಲಿನ ಕೆತ್ತನೆ
ಮುಂಬಾಗಿಲು
ಕಲಾತ್ಮಕವಾಗಿ ಕಿಟಕಿಗಳಿಗೆ ಬಳಸಲಾಗಿದೆ. ಚಾವಡಿಯಲ್ಲಿರುವ ಎರಡು
ಬೃಹತ್ ಗಾತ್ರದ ಪೂರ್ಣ ಕಂಬ ಹಾಗೂ
ಎರಡು ಅರ್ಧ ಕಂಬದಲ್ಲೂ ಕಲಾತ್ಮಕ ಕೆತ್ತನೆಗಳಿವೆ. ಕಂಬಗಳ ಕೆಳಭಾಗದಲ್ಲಿ ಕುಳಿತುಕೊಳ್ಳಲು ಅನುಕೂಲವಾಗುವಂತೆ ಕಿರಾಲ್ ಭೋಗಿ ಮರದ ಬಾಜಿರದ ರಚನೆಯಿದೆ. ಎರಡೂವರೆ ಅಡಿ ಅಗಲ ಹಾಗೂ ಅರ್ಧ ಅಡಿ ದಪ್ಪದ ಮರವನ್ನು ಇದಕ್ಕೆ ಬಳಸಲಾಗಿದೆ.
ಚಾವಡಿಯಲ್ಲಿ ಮನೆ ದೈವ ಧೂಮಾವತಿಯ`ಉಜ್ಜಾಲ್' ಇರಿಸಲಾಗಿದೆ. ಕೇರಳದ ಶಿಲ್ಪಿ ಹಾಗೂ ಗುರುಪುರ ಬಡ್ಡೂರು ಬಳಿಯ ಶಿಲ್ಪಿಯೊಬ್ಬರು ಕೆತ್ತನೆ ಕೆಲಸಗಳನ್ನು ನಿರ್ವಹಿಸಿದ್ದರು.
ಆರು ಕೋಣೆಗೆ ಸೂರ್ಯನ ಪ್ರಥಮ ಕಿರಣ
ಈ ಮನೆಯ ಇನ್ನೊಂದು ವೈಶಿಷ್ಟ್ಯವೆಂದರೆ ಪೂರ್ವ ಭಾಗದ ಒಂದು ಕೋಣೆಯೊಂದರ ಬಾಗಿಲ ಮೂಲಕ ಸೂರ್ಯನ ಪ್ರಥಮ ಕಿರಣ ಹಾದು ಮನೆಯೊಳಗಿನ ಆರು ಕೋಣೆಗಳಿಗೆ ಹಾದುಹೋಗುತ್ತಿತ್ತು. ಮನೆಯನ್ನು ರಚಿಸಿದ ಶಿಲ್ಪಿಯ ಚಾತುರ್ಯ ಇಲ್ಲಿ ಮನಗಾಣಬಹುದು.(ಪ್ರಸ್ತುತ ಒಂದು ಬಾಗಿಲನ್ನು ಮುಚ್ಚಲಾಗಿದೆ.)
ಮನೆಯ ಹಿಂಭಾಗದಲ್ಲಿ ನೇತ್ರಾವತಿ ನದಿಯ ಸೊಬಗು, ಇನ್ನೊಂದು ಬದಿಯಲ್ಲಿ ಎತ್ತರದ ಗುಡ್ಡ ಪ್ರದೇಶದ ರಮಣೀಯ ದೃಶ್ಯ ಮನೆಯ ಮಾಳಿಗೆ ಮೇಲೆ ನಿಂತಾಗ ಕಾಣಿಸುವಂತೆ ಕಿಟಕಿಗಳನ್ನಿರಿಸಲಾಗಿದೆ. ಪ್ರಕೃತಿ ರಮಣೀಯ ನೋಟದ ಜತೆಗೆ ಪ್ರಕೃತಿದತ್ತವಾದ ಗಾಳಿ ಬೆಳಕು ಕೂಡಾ ಯಥೇಚ್ಛವಾಗಿ ಮನೆಯೊಳಗೆ ಲಭಿಸುವಂತೆ ಕಿಟಿಕಿಗಳ ರಚನೆಯಿದೆ. ಓಲೆಬೆಲ್ಲ, ಮೊಟ್ಟೆಯ ಬಿಳಿಭಾಗ ಹಾಗೂ ಸುಣ್ಣ ಮಿಶ್ರಣ ಮಾಡಿ ಗೋಡೆಗೆ ಸಾರಣೆ ಮಾಡಲಾಗಿದೆ. ಎರಡು ಪದರಗಳಲ್ಲಿ ಸಾರಣೆ ಮಾಡಲಾಗಿದ್ದು, ಇಂದಿಗೂ ಅದು ಮಾರ್ಬಲ್‌ನ  ರೀತಿ ಹೊಳಪು ಮತ್ತು ಗಟ್ಟಿತನವನ್ನು ಹೊಂದಿದೆ.
ಮನೆಯ ಸುತ್ತುಪೌಳಿ ನೋಟ
ಮನೆಯ ಕೆಳಗಿನ ಸಾಲನ್ನು ಕೆಂಪುಕಲ್ಲಿನಿಂದ ಕಟ್ಟಲಾಗಿದ್ದರೆ, ಮಾಳಿಗೆಯನ್ನು ಇಟ್ಟಿಗೆಯಲ್ಲಿ ಕಟ್ಟಲಾಗಿದೆ. ಮನೆಗೆ ಬೇಕಾದ ಹೆಂಚು, ಇಟ್ಟಿಗೆಗಳನ್ನು ಧೂಮ ರೈ ಅವರ ಒಡೆತನದ ಬಿ.ತಿಮ್ಮಪ್ಪ ರೈ ಆಂಡ್ ಕೋ ಸಂಸ್ಥೆಯಿಂದ ಒದಗಿಸಲಾಗಿದೆ. ಮರಮಟ್ಟುಗಳನ್ನು ಪೊದ್ದರಿಷ್ಟೆರ್(ನೆಂಟರಿಷ್ಟರು) ನೀಡಿದ್ದರು. ಹಾಗಾಗಿ ಮನೆಯ ಕಾರ್ಮಿಕರಿಗೆ ಮಜೂರಿ ಹಾಗೂ ಇತರ ಸಾಮಾಗ್ರಿಗಳಿಗೆ ಮಾತ್ರ ಅಂದು ಖರ್ಚು ತಗುಲಿತ್ತು.
೨೫ ಕೋಣೆ, ೫೫ ಕಂಬ
ಮರ, ಇಟ್ಟಿಗೆ ಹಾಗೂ ಕಲ್ಲನ್ನು ಬಳಸಿದ ಒಟ್ಟು ೫೫ ಕಂಬಗಳನ್ನು ಹೊಂದಿರುವ ಮನೆಯಲ್ಲಿ ೨೫ ಕೋಣೆಗಳಿವೆ. ಮನೆಯ ಹೊರಗೆ ಒಂದು ಸುತ್ತು ಬರಕಲ(ಭತ್ತ ಕುಟ್ಟುವ ಜಾಗ)ವಿದೆ. ಇಲ್ಲಿ ಹಿಂದೆ ದಿನಕ್ಕೆ ೧೪ ಮುಡಿ ಭತ್ತವನ್ನು ಕುಟ್ಟಿ ಅಕ್ಕಿ ಮಾಡಲಾಗುತ್ತಿತ್ತಂತೆ. ಮನೆ ಹೊಕ್ಕಿದೊಡನೆ ಮೊದಲು ಮೊಗಸಾಲೆ, ಬಳಿಕ ಗರದಿ ಹೊಂದಿರುವ ವರಾಂಡ, ನಡುಜಾಲ್, ಬಳಿಕ ವರಾಂಡ, ಚಾವಡಿ, ನಂತರ ಕೋಣೆ, ಮುಂದಕ್ಕೆ ಸಾಗಿದರೆ ೧೦೦ ಮಂದಿ ಕುಳಿತು ಉಣ್ಣಬಹುದಾದಷ್ಟು ವಿಶಾಲವಾದ ಭೋಜನ ಶಾಲೆ, ಅಡಿಗೆ ಮನೆಯಿದೆ.
ಅಂದು ಮೂವತ್ತೆಂಟು ಸಾವಿರ, ಇಂದು ಎಂಟು ಕೋಟಿ!
ಒಟ್ಟು ಮೂರು ವರ್ಷಗಳ ಕಾಲ ನಿರ್ಮಾಣ ಕಾಮಗಾರಿ ಇಲ್ಲಿ ನಡೆದಿತ್ತು. ಅಂದು ಈ ಮನೆಗೆ ತಗುಲಿದ್ದು(ಮರಮಟ್ಟು, ಹೆಂಚು, ಇಟ್ಟಿಗೆ ಹೊರತು ಪಡಿಸಿ) ಕೇವಲ ಮೂವತ್ತೆಂಟು ಸಾವಿರ ರೂ. ಆದರೆ ಇತ್ತೀಚೆಗೆ ಈ ಮನೆಗೆ ಆಗಮಿಸಿದ ಬೆಂಗಳೂರಿನ ಆರ್ಕಿಟೆಕ್ ತಂಡ ಈ ಮನೆಯ ಮೌಲ್ಯ ಅಂದಾಜಿಸಿದ್ದು, ಬರೋಬ್ಬರಿ ಎಂಟು ಕೋಟಿ ರೂ.
ಚಲನಚಿತ್ರದಲ್ಲಿ ಬಡಿಲಗುತ್ತು 
ಮಳೆಗಾಲದಲ್ಲಿ ಸುತ್ತು ಪೌಳಿ ಮನೆಯ ಸೊಬಗು
ತಮಿಳು ಚಿತ್ರರಂಗದ ಸೂಪರ್ಸ್ಟಾರ್ ರಜನಿಕಾಂತ್ ಅಭಿನಯದ `ತನಿಕಾಟ್ಟು  ರಾಜ' ಚಿತ್ರದ ಶೇ.೯೮ ಭಾಗ ಚಿತ್ರೀಕರಣವಾದದ್ದು ಇದೇ ಬಡಿಲಗುತ್ತು ಮನೆಯಲ್ಲಿ. ಚಿತ್ರ ನಟ ಅರ್ಜುನ್ ಸರ್ಜಾ ನಿರ್ಮಾಣದ  ಚಿರಂಜೀವಿ ಸರ್ಜಾ ಅಭಿನಯದ ಪ್ರಥಮ ಕನ್ನಡ ಚಲನಚಿತ್ರ `ವಾಯುಪುತ್ರ' ಕೂಡಾ ಇದೇ ಮನೆಯಲ್ಲಿ ಚಿತ್ರೀಕರಣವಾಗಿದೆ. `ತುಳುನಾಡ ಸಿರಿ' ಕೂಡಾ ಇದೇ ಮನೆಯಲ್ಲಿ ಚಿತ್ರೀಕರಿಸಲಾಗಿತ್ತು.
ಗುತ್ತು ಮನೆಯ ವತಿಯಿಂದ ಹಿಂದೆ ಕಂಬಳ ಆಯೋಜಿಸಲಾಗುತ್ತಿತ್ತಂತೆ. ಮನೆಯ ನಿರ್ಮಾತೃ ಧೂಮ ರೈ ಹಾಗೂ ಅಂದಿನ ಕಾಲದ ಜಡ್ಜ್ ಆಗಿದ್ದವರಿಗೂ ಉತ್ತಮ ಬಾಂಧವ್ಯವಿತ್ತಂತೆ. ಗುತ್ತು ಮನೆಯ ಮುಂದೆ ನಡೆಯುತ್ತಿದ್ದ ಕಂಬಳವನ್ನು ವೀಕ್ಷಿಸಲು ಅವರು ಆಗಮಿಸುತ್ತಿದ್ದರಂತೆ.
ಮಂಗಳೂರು ಹೋಬಳಿ ವ್ಯಾಪ್ತಿಯ ಕೊಡಿಯಾಲ್ಗುತ್ತು, ಜಪ್ಪು ಗುಡ್ಡೆ ಗುತ್ತು ಹಾಗೂ ಬಡಿಲಗುತ್ತು ಒಂದಕ್ಕೊಂದು ಸಂಬಂಧವಿರಿಸಿಕೊಂಡಿದೆ. ಪ್ರಸ್ತುತ ಮನೆಯ ಮೇಲುಸ್ತುವಾರಿಯನ್ನು ವಸಂತರಾಮ ಶೆಟ್ಟಿ, ಸುಖಲತಾ ಬಿ.ರೈ ಹಾಗೂ ತಿಮ್ಮಪ್ಪ ಶೆಟ್ಟಿ ಟ್ರಸ್ಟ್ ನೋಡಿಕೊಳ್ಳುತ್ತಿದೆ.