Sunday, 25 June 2023

ಏನೆಂದು ಹೆಸರಿಡಲಿ ಈ ಚಂದ ಅನುಭವಕೆ

ಮಾನ್ಸೂನ್ ಬೀಚ್ ಟ್ರೆಕ್ ಎಂದರೆ ಬೀಚ್ ಬದಿಯಲ್ಲಿ ಮರಳಲ್ಲಿ ನಡೆಯುತ್ತಾ, ಉಪ್ಪು ನೀರಲ್ಲಿ ಕಾಲದ್ದಿ ತೆಗೆದು ಉದ್ದಾನು ಉದ್ದಕ್ಕೆ ನಡೆಯುತ್ತಾ ಸಾಗುವ ಕಲ್ಪನೆಗೆ ಭಿನ್ನವಾಗಿ ಸಾಗಿದ ಟ್ರೆಕ್ಕಿಂಗ್ ಮನದಲಿ ಮೂಡೊಸಿದ ಭಾವನೆ ಒಂದೇ

ಏನೆಂದು ಹೆಸರಿಡಲಿ ಈ ಚಂದ ಅನುಭವಕೆ

ನಿಜ ಗೋಕರ್ಣದ ಸುತ್ತಮುತ್ತಲಿನ ಬೀಚ್‌ಗಳೇ ಹಾಗೆ. ಬೀಚ್ ಸಮತಟ್ಟಾಗಿ ಸಾಗದೆ ಅಲ್ಲಲ್ಲಿ ಗುಡ್ಡಬೆಟ್ಟಗಳೂ ಇವೆ. ಹಾಗಾಗಿ ಒಂದೆಡೆ ಗುಡ್ಡದ ನಡುವೆ ಸಾಗುತ್ತಾ, ಕಾಡಿನ ಅನುಭವದೊಂದಿಗೆ ಕೆಳಗಿಳಿದರೆ ಮತ್ತೆ ಬೀಚ್‌ನ ಸೌಂದರ್ಯ. ಅಲ್ಲೇ ಮತ್ತೆ ಮೇಲಕ್ಕೇರಿ ಟ್ರೆಕ್ ಆರಂಭಿಸಿದರೆ ಹಸಿರು ಕಾನನದೊಳಗೆ ಹೋದ ಖುಷಿ.

ಅತ್ತ ಹೆಚ್ಚು ಅಲ್ಲದೆ, ಇತ್ತ ಕಡಿಮೆಯೂ ಅಲ್ಲದೆ ಸುರಿಯುತ್ತಿದ್ದ ಮುಂಗಾರಿನೊಂದಿಗೆ ಹೆಜ್ಜೆ ಹಾಕಿದ ನಮ್ಮ ಮಂಗಳೂರಿನ ಯೂತ್ ಹಾಸ್ಟೆಲ್ ತಂಡ ಆಯೋಜಿಸಿದ ಟ್ರೆಕ್ಕಿಂಗ್ ಹೊಸ ನೆನಪುಗಳನ್ನು ದಾಖಲಿಸಿಬಿಟ್ಟಿತು ಮನದಲ್ಲಿ.

ಎರಡು ದಿನಗಳ ಟ್ರೆಕ್ಕಿಂಗ್‌ನಲ್ಲಿ ಮೊದಲ ದಿನ ನೋಡಿದ ಉಂಚಳ್ಳಿ ಫಾಲ್ಸ್ ಪ್ರಕೃತಿ ಸೊಬಗಿನ ಅನಾ





ಗುಡ್ಡದ ಮೇಲಿಂದ ಕಾಣುವ ಬೀಚ್‌ನ ಸೌಂದರ್ಯ

ಗೋಕರ್ಣ ದೇವಸ್ಥಾನದ ಹೊರಭಾಗದಲ್ಲಿರುವ ದೊಡ್ಡ ಶಿವಲಿಂಗ


ಮಿರ್ಜಾನ ಕೋಟೆ

ಉಂಚಳ್ಳಿ ಫಾಲ್ಸ್

ವರಣ ಮಾಡಿದರೆ, ಮಿರ್ಜಾನ ಕೋಟೆ ಗತ ಕಾಲದ ಐತಿಹಾಸಿಕ ವೈಭವ ಸಾರಿತು.

ಪ್ರತಿ ಭಾರಿ ಭೇಟಿ ನೀಡಿದಾಗ ಹೊಸ ಹೊಳವು ನೀಡುವ ಪ್ರತಿಯೊಂದು ದೇವಾಸ್ಥಾನದಂತೆ ಗೋಕರ್ಣ ದೇವಸ್ಥಾನವೂ ಈ ಬಾರಿ ಮತ್ತಷ್ಟು ತನ್ನನ್ನು ತಾನು ಅನಾವರಣಗೊಳಿಸಿತು.

ಪ್ರಧಾನ ಶಿವಲಿಂಗ ಮಾತ್ರವಲ್ಲದೆ ಸುತ್ತಮುತ್ತ ಅದೆಷ್ಟೋ ಲಿಂಗಗಳು, ಅವುಗಳ ಹೆಸರು ಶಿವ ಸರ್ವಾಂತರ್ಯಾಮಿ ಎಂಬುದನ್ನು ಮತ್ತೆ ಮತ್ತೆ ನೆನಪಿಸಿತು.

ಬೇಲೆಕಾನ್, ಪ್ಯಾರಡೈಸ್, ಹಾಫ್ ಮೂನ್, ಓಂ, ಕೂಡ್ಲೆ ಬೀಚ್‌ಗೆ ಭೇಟಿ ನೀಡಿದಾಗ, ದೂರದಿಂದ ಸೌಂದರ್ಯ ಆಸ್ವಾದಿಸಿದಾಗ ಈ ಸಾಗರ ಎಷ್ಟು ವಿಶಾಲ, ನಾವೆಷ್ಟು ಸಣ್ಣ ಎಂಬ ಮೂಡಿದ ಭಾವದೊಂದಿಗೆ ನೆನಪಿನ ಬುತ್ತಿಯಲ್ಲಿ ಮತ್ತೊಂದಿಷ್ಟು ಅನುಭವ ಸೇರಿಕೊಂಡಿತು.

Saturday, 28 January 2023

ಅನುಭವ ಅಲ್ಲ... ಅನುಭಾವ








ಒಂದು
ಮೊಟ್ಟೆಯ ಕಥೆ ಸಿನಿಮಾದಲ್ಲಿ ನಟ ರಾಜ್ ಬಿ.ಶೆಟ್ಟಿ ಅವರು ಪ್ರಕಾಶ್ ತೂಮಿನಾಡು ಅವರಲ್ಲಿ ತಾನು ಬರೆದ ಪತ್ರವನ್ನು ಓದುವಾಗ ಅದು ಅನುಭವ ಅಲ್ಲಅನುಭಾವಎಂಬ ಮಾತು ಹೇಳುತ್ತಾರೆ.

ಅನುಭವ ಮತ್ತು ಅನುಭಾವದ ನಡುವೆ ಒಂದು ಧೀರ್ಘದ ವ್ಯತ್ಯಾಸವಾದರೂ ಇವೆರಡರ ನಡುವಿನ ಅಂತರ ಸ್ವಂತಕ್ಕೆ ವೇದ್ಯವಾದಾಗ ಮಾತ್ರ ತಿಳಿಯಬಹುದು.

ಇದೇ ಅನುಭವ ಮತ್ತು ಅನುಭಾವ ಮೇಳೈಸುವುದು ಚಾರಣದ ಮಧುರ ಯಾತನೆಯಲ್ಲಿ ಮಾತ್ರ.

ಅಲ್ಲಿ ಅನುಭವ ಒಂದೇ ಆದರೂ ಅನುಭಾವ ಮಾತ್ರ ವಿಭಿನ್ನ. ಚಾರಣ ಎಂದಾಕ್ಷಣ ಗುಡ್ಡ, ಬೆಟ್ಟ ಹತ್ತುವುದು ಎಂಬ ಸಾಮಾನ್ಯ ಅನಿಸಿಕೆಯಾದರೂ ಅದರಳೊಗಣ ಆನಂದ ಅನಿರ್ವಚನೀಯ

ನೋಡಗರೆಲ್ಲರಿಗೂ ಗುಡ್ಡ ಒಂದೇ…‌ಬೆಟ್ಟವೂ ಒಂದೇಪ್ರತಿಯೊಬ್ಬನೂ ಪ್ರತಿ ಬಾರಿ ಮಾಡುವ ಚಾರಣವೂ ಒಂದೇಆದರೆ ಪರಿಸರ, ಪ್ರಕೃತಿ ಯನ್ನು ಸೂಕ್ಷ್ಮವಾಗಿ ಗಮನಿಸುತ್ತಾ ಹೋದರೆ ಅನುಭವ ಅಲ್ಲಅನುಭಾವ ಸ್ಪುರಣಗೊಳ್ಳುತ್ತಾ ಸಾಗುತ್ತದೆ.

ಅಲ್ಲೊಂದು ಕಲ್ಲುಇಲ್ಲೊಂದು ತೊರೆಸನಿಹದಲ್ಲೇ ಬೃಹತ್ ಗಾತ್ರದ ಮರ, ಹೊಸ ನಿನಾದ ಮೂಡಿಸುವ ಹಕ್ಕಿಗಳಿಂಚರಎತ್ತರದಿಂದ ಧುಮ್ಮಿಕ್ಕುವ ಜಲಧಾರೆಬಿರುಬಿಸಿಲಿನಲ್ಲೂ ಬೋಳುಬೋಳಾದ ಗುಡ್ಡವನ್ನೇರಿ ತುತ್ತ ತುದಿಯಲ್ಲಿ ನಿಂತಾಗ ಮೈಗೆ ಸೋಕುವ ಕುಳಿರ್ಗಾಳಿಎಲ್ಲವೂ ಅನುಭವದಲ್ಲಿ ಒಂದೇ ಅನಿಸಿದರೂ, ಅನುಭಾವ ಮಾತ್ರ ಭಿನ್ನ.

ಚಾರಣದ ಆರಂಭದಿಂದ ಗುರಿ ಮುಟ್ಟುವ ವರೆಗೆ ಸಾಗಿದ ಹಾದಿ, ಹಿಂದೆ ಮಾಡಿದ ಚಾರಣದ ಅನುಭವ ಮೂಡಿಸಿದರೂ, ಸುತ್ತಮುತ್ತ ಕಾಣುವ ಹಚ್ಚ ಹಸಿರ ಬನಸಿರಿಯ ನಡುವೆ ಪ್ರತಿ ಬಾರಿಯೂ ಜತೆಯಾಗುವ ಚಾರಣಿಗರ ಭಿನ್ನ ಭಿನ್ನ ಅಭಿರುಚಿಯ ಜತೆಗೆ ಸೇರುವ ನಮ್ಮ ಅಭಿರುಚಿ ಅನುಭಾವಕ್ಕೆ ಮಾತ್ರ ನಿಲುಕುವಂತದ್ದು.

ಒನಕೆಯಂತೆ ಕಾಣುವ ಕಾರಣಕ್ಕೆ ಒನಕೆ ಅಬ್ಬಿ, ಬೆಳ್ಳಿಯ ದಾರವೊಂದು ಇಳಿದು ಬಂದಂತೆ ಕಾಣುವ ಕಾರಣಕ್ಕೆ ಬೆಳ್ಳಿಗುಂಡಿ, ಬೆಣ್ಣೆಯಂತೆ ಕಾಣುವ ಕಾರಣಕ್ಕೆ ಬೆಣ್ಣೆ ಫಾಲ್ಸ್

ಹೀಗೆಮೇಲಿಂದ ಧುಮ್ಮಿಕ್ಕುವ ನೀರೇ ಆದರೂ ಅದರ ಗಾತ್ರ, ಎತ್ತರ, ಕಾಣುವ ಅಂದಕ್ಕೆ ತಕ್ಕಂತೆ ಅವುಗಳಿಗೆ ನೀಡಿದ ಹೆಸರು ಅನೇಕ. ಇವೆಲ್ಲವೂ ಅನುಭವಕ್ಕೆ ಸಿಗದೆ ಅನುಭಾವಕ್ಕೆ ನಿಲುಕುವಂತದ್ದೇ ಸರಿ.

ಬೆಟ್ಟದ ಮೇಲೆ ನಿಂತು 360 ಡಿಗ್ರಿಯಲ್ಲಿ ಕಣ್ಣಿನ ದೃಷ್ಟಿ ಹರಿಸಿದಾಗ ಕಾಣುವ ಉಬ್ಬುತಗ್ಗುಗಳ ಗಿರಿಕಂದರಗಳ ಸಾಲು ಸಾಲು ಹರಿದ್ವರ್ಣದ ಕಾಡು ಮೈಮನಗಳಿಗೆ ನೀಡುವ ಅನುಭೂತಿ ಅದು ಪಟ್ಲ ಬೆಟ್ಟವೇ, ಮುಳ್ಳಯ್ಯನಗಿರಿಯೇ, ಕುಮಾರ ಪರ್ವತವೇ, ನಿಶಾನಿ ಮೊಟ್ಟೆಯೇಯಾವುದೇ ಆಗಿರಲಿ ನೋಡಲು ಒಂದೇ ತೆರನಾದರೂ ಕಾಣುವ ಅಂದ ಅಲ್ಲಿ ನಿಂತಾಗಲಷ್ಟೇ ಅನುಭಾವಕ್ಕೆ ಸಿಲುಕುವಂತದ್ದು.

ತಾನೇ ಎಲ್ಲ ಎಂಬ ಭಾವದೊಂದಿಗೆ ಊರಿಗೆ ಊರನ್ನೇ ಆಳಿದ ಅರಸರು ಕಟ್ಟಿದ ಕೋಟೆ ಕೊತ್ತಲಗಳು ಅನಾಥವಾಗಿ ಎಲ್ಲವೂ ನಶ್ವರ ಎಂಬ ಸತ್ಯದರ್ಶನ ಕವಲೇದುರ್ಗ, ಮಿರ್ಜಾನ ಕೋಟೆ, ಬಲ್ಲಾಳರಾಯನ ದುರ್ಗ, ಮಂಜಿರಾಬಾದ್‌ಗಳ ಮೇಲೆ ನಿಂತು ಪಾಳುಬಿದ್ದ ಬುರುಜುಗಳನ್ನು ನೋಡಿದಾಗ ಹೃದ್ಯವಾಗುತ್ತದೆ.

ಎತ್ತರದಲ್ಲಿ ನಿಂತಾಗಲಷ್ಟೇ ಕಣ್ಣು ಹಾಯಿಸಿದಷ್ಟು ಉದ್ದಕ್ಕೆ ಕಾಣುವ ವಿಶಾಲ ಭೂಮಿಯಲ್ಲಿ ನಾವೆಷ್ಟು ಸಣ್ಣವರು ಎಂಬ ಅನುಭೂತಿ ಮೂಡಲು ಸಾಧ್ಯ.

ಪ್ರಕೃತಿಯ ಒಡಲಲ್ಲಿ ಒಂದಾಗಿ ತನ್ನನ್ನು ತಾನು ಮರೆತಾಗ ಸಿಗುವುದೇಅನುಭವ ಅಲ್ಲಅನುಭಾವ.