ಮಾನ್ಸೂನ್ ಬೀಚ್ ಟ್ರೆಕ್ ಎಂದರೆ ಬೀಚ್ ಬದಿಯಲ್ಲಿ ಮರಳಲ್ಲಿ ನಡೆಯುತ್ತಾ, ಉಪ್ಪು ನೀರಲ್ಲಿ ಕಾಲದ್ದಿ ತೆಗೆದು ಉದ್ದಾನು ಉದ್ದಕ್ಕೆ ನಡೆಯುತ್ತಾ ಸಾಗುವ ಕಲ್ಪನೆಗೆ ಭಿನ್ನವಾಗಿ ಸಾಗಿದ ಟ್ರೆಕ್ಕಿಂಗ್ ಮನದಲಿ ಮೂಡೊಸಿದ ಭಾವನೆ ಒಂದೇ…
ಏನೆಂದು ಹೆಸರಿಡಲಿ
ಈ ಚಂದ ಅನುಭವಕೆ…
ನಿಜ ಗೋಕರ್ಣದ
ಸುತ್ತಮುತ್ತಲಿನ ಬೀಚ್‌ಗಳೇ ಹಾಗೆ.
ಬೀಚ್ ಸಮತಟ್ಟಾಗಿ ಸಾಗದೆ ಅಲ್ಲಲ್ಲಿ ಗುಡ್ಡಬೆಟ್ಟಗಳೂ ಇವೆ. ಹಾಗಾಗಿ ಒಂದೆಡೆ ಗುಡ್ಡದ ನಡುವೆ ಸಾಗುತ್ತಾ, ಕಾಡಿನ ಅನುಭವದೊಂದಿಗೆ
ಕೆಳಗಿಳಿದರೆ ಮತ್ತೆ ಬೀಚ್‌ನ ಸೌಂದರ್ಯ. ಅಲ್ಲೇ ಮತ್ತೆ ಮೇಲಕ್ಕೇರಿ ಟ್ರೆಕ್
ಆರಂಭಿಸಿದರೆ ಹಸಿರು ಕಾನನದೊಳಗೆ ಹೋದ ಖುಷಿ.
ಅತ್ತ ಹೆಚ್ಚು
ಅಲ್ಲದೆ, ಇತ್ತ ಕಡಿಮೆಯೂ
ಅಲ್ಲದೆ ಸುರಿಯುತ್ತಿದ್ದ ಮುಂಗಾರಿನೊಂದಿಗೆ ಹೆಜ್ಜೆ ಹಾಕಿದ ನಮ್ಮ ಮಂಗಳೂರಿನ ಯೂತ್ ಹಾಸ್ಟೆಲ್ ತಂಡ
ಆಯೋಜಿಸಿದ ಟ್ರೆಕ್ಕಿಂಗ್ ಹೊಸ ನೆನಪುಗಳನ್ನು ದಾಖಲಿಸಿಬಿಟ್ಟಿತು ಮನದಲ್ಲಿ.
ಎರಡು ದಿನಗಳ ಟ್ರೆಕ್ಕಿಂಗ್‌ನಲ್ಲಿ ಮೊದಲ ದಿನ ನೋಡಿದ ಉಂಚಳ್ಳಿ ಫಾಲ್ಸ್ ಪ್ರಕೃತಿ ಸೊಬಗಿನ ಅನಾ
ಗುಡ್ಡದ ಮೇಲಿಂದ ಕಾಣುವ ಬೀಚ್‌ನ ಸೌಂದರ್ಯ |
ಗೋಕರ್ಣ ದೇವಸ್ಥಾನದ ಹೊರಭಾಗದಲ್ಲಿರುವ ದೊಡ್ಡ ಶಿವಲಿಂಗ |
ಮಿರ್ಜಾನ ಕೋಟೆ |
ಉಂಚಳ್ಳಿ ಫಾಲ್ಸ್ |
ವರಣ ಮಾಡಿದರೆ, ಮಿರ್ಜಾನ ಕೋಟೆ ಗತ ಕಾಲದ ಐತಿಹಾಸಿಕ ವೈಭವ ಸಾರಿತು.
ಪ್ರತಿ ಭಾರಿ
ಭೇಟಿ ನೀಡಿದಾಗ ಹೊಸ ಹೊಳವು ನೀಡುವ ಪ್ರತಿಯೊಂದು ದೇವಾಸ್ಥಾನದಂತೆ ಗೋಕರ್ಣ ದೇವಸ್ಥಾನವೂ ಈ ಬಾರಿ ಮತ್ತಷ್ಟು
ತನ್ನನ್ನು ತಾನು ಅನಾವರಣಗೊಳಿಸಿತು.
ಪ್ರಧಾನ ಶಿವಲಿಂಗ
ಮಾತ್ರವಲ್ಲದೆ ಸುತ್ತಮುತ್ತ ಅದೆಷ್ಟೋ ಲಿಂಗಗಳು,
ಅವುಗಳ ಹೆಸರು ಶಿವ ಸರ್ವಾಂತರ್ಯಾಮಿ ಎಂಬುದನ್ನು ಮತ್ತೆ ಮತ್ತೆ ನೆನಪಿಸಿತು.
ಬೇಲೆಕಾನ್, ಪ್ಯಾರಡೈಸ್, ಹಾಫ್ ಮೂನ್, ಓಂ, ಕೂಡ್ಲೆ ಬೀಚ್‌ಗೆ
ಭೇಟಿ ನೀಡಿದಾಗ, ದೂರದಿಂದ ಸೌಂದರ್ಯ ಆಸ್ವಾದಿಸಿದಾಗ ಈ ಸಾಗರ ಎಷ್ಟು ವಿಶಾಲ,
ನಾವೆಷ್ಟು ಸಣ್ಣ ಎಂಬ ಮೂಡಿದ ಭಾವದೊಂದಿಗೆ ನೆನಪಿನ ಬುತ್ತಿಯಲ್ಲಿ ಮತ್ತೊಂದಿಷ್ಟು
ಅನುಭವ ಸೇರಿಕೊಂಡಿತು.